Friday, 26 August 2011

ಚೆಡ್ಡಿ ದೊಸ್ತ್ ಟೀಮು

 
ಚೆಡ್ಡಿ ದೊಸ್ತ್ ಟೀಮು

ಬಾಸ್ಕರ->ಸುನೀಲ->ವಿಶ್ವನಾಥ->ಚಂದ್ರಶೇಖರ->ಚೇತನ 
ಇನ್ನೂ ಇದೀವಿ

ಸಿನ್ಸ್ 1994 to 2........ 

ಹಾಗೆ ಹೇಳಿಕೊಳ್ಳೋದಕ್ಕೆ ನಮಗೆ ಬೇಜಾರಿಲ್ಲ. ಕೀಳರಿಮೆಯಂತೂ ಇಲ್ವೇ ಇಲ್ಲ. ಹಾಗಂತಾ ಬಾಲ್ಯದ ಜೀವನಾ ಕಷ್ಟನೇ ಆಗಿಲ್ವಾ ಅಂತಾ ಕೇಳಿದ್ರೆ..., ಖಂಡಿತಾ ಆಗಿದೆ.... ಅಷ್ಟಕ್ಕೂ ಅದನ್ನಾ ದಾಟಿ ಬಂದಿದೀವಿ... ಇನ್ನೂ ಮುಂದೆ ಮುಂದೆ ದಾಪುಗಾಲಿಡುತ್ತಾ ಇದೀವಿ. ಆದ್ರೆ ಮುಂದೆ ಹೋದ ತಕ್ಷಣ ಹಿಂದಿನ ದಿನಗಳನ್ನೆಲ್ಲಾ ಮರೆಯೋಕೆ ಆಗುತ್ತಾ..? ಆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳೋದಕ್ಕೆ, ನಮ್ಮಂತಾ ಅದೆಷ್ಟೋ ಜನರಿಗೆ ನೆನಪು ಮಾಡಿಸೋದಕ್ಕೆ ಈ ಬ್ಲಾಗ್ ಒಂದು ಪುಟ್ಟ ಅಂಗಳ ಅಷ್ಚೇ. ನಾವೆಲ್ಲಾ ಒಟ್ಟಾಗಿ ಇಲ್ಲಿ ನಮ್ ಬಗ್ಗೆ, ಆಡಿದ್ದು, ಕುಣಿದಿದ್ದು, ಆಟ, ಪಾಠ, ಊಟ, ಜಗಳ, ತೀಟೆ, ಮುನಿಸು, ಕೋಪ ಹಾಗೂ ಈಗಿನ ವೃತ್ತಿ ಜೀವನದ ಸಂತಿಗಳ ಬಗ್ಗೆ ಇನ್ನೂ ಏನೆಲ್ಲಾ.........

ನಮ್ಮ ಆ ದಿನಗಳನ್ನಾ ನೆನಪಿಸಿಕೊಳ್ಳೋಣ. ಈ ದಿನ ಹೇಗಿದೆ ಅನ್ನೋದನ್ನಾ ಕಣ್ಬಿಟ್ಟು ನೋಡೋಣ.
ಸಲಹೆಗಳಿಗೆ ಸದಾ ಸ್ವಾಗತ.......

ಜೀವನವೆಂದರೆ ನಾವು ಹುಟ್ಟಿನಿಂದ - ಸಾವಿನವರೆಗೂ ಬದುಕಲು ಕಲಿಸುವ ಒಂದು ಪುಸ್ತಕ. ಅದರ ಕೊನೆಯ ಪುಟಗಳು ಹರಿದು ಹೋಗಿರುತ್ತವೆ. ಪುಸ್ತಕದ ಪ್ರತಿಯೊಂದು ಅಧ್ಯಾಯದಲ್ಲಿ ನಾವು ಏನಾದರೊಂದನ್ನು ಕಲಿಯುತ್ತಾ ಹೋಗುತ್ತೇವೆ, ಅನುಭವಿಸುತ್ತೇವೆ, ಸ್ವೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದ ಪುಸ್ತಕವು ಬೇರೆ-ಬೇರೆಯದಾಗಿರುತ್ತದೆ. ಜೀವನವೆಂಬ ಪುಸ್ತಕದಲ್ಲಿ ನಮಗೆ ಅರಿಯಲಾರದ ಹೇಳಲಾರದ ರಹಸ್ಯಗಳು, ಬದಲಿಸಲಾಗದ ಸುಖ, ದುಃಖ-ಪಶ್ಚಾತಾಪಗಳು, ನನಸಾಗದ ಕನಸುಗಳು ಮತ್ತು ಮರೆಯಲಾಗದ ಪ್ರೀತಿ,ನೆನಪುಗಳು, ಅನುಭವಗಳು ತುಂಬಿರುತ್ತದೆ. ನಾವು ಕೊನೆಯುಸಿರೆಳೆಯುವ ಕೊನೆ ಘಳಿಗೆಯಲ್ಲಿ, ಜೀವನವೆಂಬ ಪುಸ್ತಕದ ಕೊನೆಯ ಪುಟಗಳು ಇರಲಾರದ ಕಾರಣ ನಮ್ಮ ಜೀವನದ ಪಾಠಕ್ಕೆ ನಮ್ಮದೇ ಆದ ಕೊನೆಯನ್ನು ಹೇಳಿ ಹೊರಡುತ್ತೇವೆ. ನಿಮ್ಮ ಜೀವನವೆಂಬ ಪುಸ್ತಕವನ್ನು ಇಷ್ಟಪಟ್ಟು, ಕುತೂಹಲದಿಂದ ಓದಿ ಕಲಿಯಿರಿ,ಬೇಸರವಾಯಿತೆಂದು ಸುಟ್ಟು ಹಾಕಬೇಡಿ. ಜೀವನವೆಂಬ ಪುಸ್ತಕದ ಕೊನೆಯನ್ನು ನಾವು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು.
ಕಣ್ಣು ತೆರೆದರೆ ಜನನ, ಕಣ್ಣು ಮುಚ್ಚಿದರೆ ಮರಣ,
ಇವೆರಡರ ನಡುವೆ ರೆಪ್ಪೆಯಾಡಿಸುವುದೇ, ಜೀವನ
ಆ ಜೀವನದಲ್ಲಿ ಬಂದು ಮಿಡಿಯುವುದೇ, ನಮ್ಮೀ ಗೆಳತನ.

ಸ್ನೇಹ ಎನ್ನುವುದು ಕೃಷ್ಣ- ಕುಚೇಲರಂತಿರಬೇಕು;
ಈ ಸ್ನೇಹಕ್ಕೆ, ಬಡವ-ಶ್ರೀಮಂತ, ಮೇಲು-ಕೀಳು, ಜಾತಿ-ಬೇದ ಗಂಡು-ಹೆಣ್ಣು ಎನ್ನುವುದಿರುವುದಿಲ್ಲ. ಇದು ಯಾರಲ್ಲಿ ಇರುವುದಿಲ್ಲವೋ ಅವರು ನಿಜವಾಗಿಯೂ ಸ್ನೇಹ ಜೀವಿಗಳಾಗಿರುತ್ತಾರೆ.

ಒಂದೇ ವಯಸ್ಸಿನ ಎರಡು ಮಕ್ಕಳು;
ಅವರು ಯಾರು ಅಂತ ಅವರಿಗೇ ಗೊತ್ತಿರೋದಿಲ್ಲ. ಆದ್ರು ಆ ಮಕ್ಕಳು ಬೇಗ ಒಂದಾಬ್ಗಿಡ್ತಾರೆ. ಆ ಮುಗ್ದ ಮಾತು, ಹಾ ಹಾಃ! ಅವರ ಆಟಿಕೆಯನ್ನು ಮತ್ತೊಬ್ಬರು ಕಸಿದುಕೊಂಡರೆ, ಅದನ್ನು ಮತ್ತೆ ಹಿಂದಿರುಗಿಸುವ ತನಕ ಬಿಡೋದಿಲ್ಲ ಆ ಮಗು, ಇದು ಗೆಳೆತನ.
ಹಾಗೇ......! ಸ್ಕೂಲಿಗೆ ಹೋಗುವ ಮಕ್ಕಳು, ಕಾಯುತ್ತಾ..., ಅವರ ಜೋತೆ ಕೂತ್ಕೊಂಡು, ಕೈ ಕೈ ಹಿಡ್ಕೋಂಡು, ಒಬ್ಬರ ಬಾಕ್ಸ್ ಇನ್ನೊಬ್ಬರು ಶೆರ್ ಮಾಡ್ಕೊಂಡು ತಿಂತಾರೆ, ಹೀಗೆ ನಮ್ಮ ಸ್ಕೂಲ್ ಲೈಫ್ ನಲ್ಲಿ ನಡೆದಿದೆ. ನಿಮ್ಮ ಲೈಫ್ ನಲ್ಲೂ ಹೀಗೇನಾ.....?

ಚೇತನ್ .ಬಿ (ನನ್ ಸ್ಟೋರಿ)

ನನ್ ಹೆಸರು ಚೇತನ್ ಅಂತ 
ಎಲ್ಲಾರೂ ಚೇತಿ ಅಂತ ಕರೀತಾರೆ.
ನನಗೆ ನನ್ನ ಅಪ್ಪ, ಅಮ್ಮ 
ಮತ್ತೆ ನನ್ನ ಪ್ರೀತಿಯ ಅಣ್ಣ ಇದ್ದಾರೇ.

ನಮ್ಮ ಮನೆ ಒಂದು ಮುದ್ದಿನ ಅರಮನೆ.
                   ನನ್ನದು ಚಿಕ್ಕದಾದ ಸಂಸ್ಕಾರದಿಂದ ಕೂಡಿರುವ ಸಂಸಾರ....

ನಮ್ ಪ್ಯಾಮಿಲಿಯಲ್ಲಿ ನನ್ ಕಂಡ್ರೆ ಏನೂ ಒಂಥರಾ ಇಷ್ಟ. ಅಮೇಲೆ ನಮ್ಮ ಊರು ನಂಗೆ ತುಂಬಾ ತುಂಬಾ ತುಂಬಾ ಇಷ್ಟ. ಏಕೆಂದರೆ ನಾನು ಹುಟ್ಟಿ ಬೆಳೆದ, ಹಾಡಿ ಕುಣಿದ ಊರು ಇದು. ನಾನು ನನ್ನ ಪ್ರೀತಿಯ ಪ್ರೆಂಡ್ಸ್ ನನಗೆ ಇಷ್ಟವಾದ ಜಾಗಗಳು, ಮತ್ತೆ ನಾನು ಓದಿ ಕಲಿತ ಜಾಗ ಇದು ಅದಕ್ಕೆ ನನ್ನೂರು ನಂಗಿಷ್ಟ...

ನನಗೆ ತುಂಬಾ ಇಷ್ಟವಾದ ಜಾಗ ಅಂದ್ರೆ ನಮ್ಮೂರಿಂದ 5 ಕಿ.ಮೀ ದೂರವಿರೂ ಮುತ್ಯಾಲಮಡುವು. ನಿಜ ಹೇಳಬೇಕೆಂದರೆ ಇದೊಂದು ಸಖತ್ ಜಾಗ. ಜಾಗ ಅನ್ನೊದಕ್ಕಿಂತ ಮನಸ್ಸಿಗೆ ಉಲ್ಲಾಸ ತರೋಂತಹ ಮನಸಿಗೆ ಮುದ ನೀಡೊಂತ ನೆಮ್ಮದಿ ಸಿಗೊಂತ ಜಾಗ. ಇದು ಬರೀ ನನ್ ಒಬ್ಬನ್ಗೆ ಅಲ್ಲಾ ನನ್ನ ಎಲ್ಲಾ ಪ್ರೆಂಡ್ಗಳಿಗೂ ಅಷ್ಟೆ ಸಖತ್ ಇಷ್ಟ. ಅದು ನಮ್ಮೆಲ್ಲರಿಗೂ ಅಡ್ಡ ಅಗಿತ್ತು.

ಇನ್ನು ನನ್ನ ಎಲ್ಲಾ ಪ್ರಂಡ್ಸ್ ಎಲ್ಲಾ ತರ್ಲೆಗಳು. ಹಹಹಹಹಹಹಹ ಹ .....ಅಲ್ಲಾ ಅಲ್ಲಾ ನಿಜ ಹೇಳಬೇಕು ಅಂದ್ರೆ ಎಲ್ಲಾರೂ ಪಕ್ಕ ಕಷ್ಟ ಜೀವಿಗಳು ಏಕೆಂದರೆ ನಮ್ಗೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇವತ್ತು ಎಲ್ಲಾರೂ ಒಂದೊಂದು ಕಡೆ ಕೆಲಸ ಮಾಡ್ತಾ ಇದೀವಿ...... ಕೆಲಸಗಳನ್ನ ರೂಪಿಸಿಕೊಂಡಿದ್ದೀವಿ.....ಮತ್ತೆ ನಾವು ಆಡಿ ಬೆಳೆದಿದ್ದು. ನಾವು ಒಡೆದಾಡ್ತಾ ಇದ್ದಿದ್ದು. ಜಗಳ, ಮುನಿಸು, ಕಿತ್ತಾಟ, ಹಾರಾಟ ಮತ್ತೆ ಒಂದಾಗೋದು. ಹಂಚಿಕೊಂಡ್ ತಿನ್ನೂ ಒಳ್ಳೇ ಬುದ್ದಿ ಎಲ್ಲಾ ಎಲ್ಲಾ ಒಂಥರಾ ನಿಜ ಸಖತ್ ಆಗಿತ್ತು....

ಎಸ್.ಎಸ್.ಎಲ್.ಸಿ ಟೈಂ ಅಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಓದ್ತಾದಿದ್ದು. ದೇವಸ್ಥಾನಗಳನ್ನು ಸುತ್ತಿದ್ದು. ಕಂಬನ ಗಣಪತಿಗೆ ಹರಕೆ ಕಟ್ಟಿದ್ದು ಎಲ್ಲಾ ಓಂಥರಾ ಸೂಪರ್ ಸವಿ ನೆನಪು. ಕೊನೆಗೂ ಅಷ್ಟೇಲ್ಲಾ ಕಷ್ಟಪಟ್ಟು ಓದಿ ಪಾಸಾದೇ.ಪುಲ್ ಖುಷಿನೋ ಖುಷಿ ನಿಜ.. ಆದ್ರೆ ಅಷ್ಟೇ ಬೇಜಾರ್ ನನ್ನಿಬ್ರು ಪ್ರೆಂಡ್ಸ್ ಫೇಲ್ ಆಗಿದ್ರು.ಅದುಕ್ಕೆ ತುಂಬಾನೇ ಜೇಜಾರು...

ನಮ್ ಗ್ರೂಫ್ ಅಂದ್ರೆ ನಾನು ಬಾಸ್ಕರ, ಚಂದ್ರ, ಸುನೀಲ, ವಿಶ್ವ ಇಷ್ಟು ಜನ ಮತ್ತೆ ಇಷ್ಟೇ ಜನ ಅಂತ ಅಲ್ಲಾ ಇನ್ನೂ ಇದ್ರು ಇಗ್ಲೂ ಇದಾರೇ ಮುಂದೇನೂ ಇರ್ತಾರೆ.....

 ನಾನ್ ಓದಿರೂದು ಒಂದು ಪದವಿ ಅದು ಬಿ.ಎಪ್.ಎ (ಬ್ಯಾಚುಲರ್ ಆಫ್ ಪೈನ್ ಆರ್ಟ್ಸ್) ಅಂತ ಹಾಗೂ ಹೀಗೂ ಕಷ್ಟಪಟ್ಟು ಕೆಲಸ ಮಾಡ್ಕೊಂಡ್ ಪ್ರೆಂಡ್ಸ್ ಗಳ ಹೆಲ್ಪ್ ಇಂದ ನಮ್ ಮನೆ, ನಮ್ ಅಣ್ಣನಿಂದ ಅನ್ಕೊಂಡಿದ್ ಮುಗಿಸ್ದೆ......

ಫಿಲಮ್ಮು, ಸೀರಿಯಲ್ಲು, ಆಡ್ಸ್ ಮತ್ತೆ ಸೆಟ್ ವರ್ಕ್ ಅಂತ ಎಲ್ಲಾಕಡೆ ಕೆಲಸ ಮಾಡಿ ಪೈಟಿಂಗ್ ಮಾಡಿಕೊಂಡು ಕೊನೆಗೆ ಈಗ ಒಂದು ಕಡೆ ಡಿಸೈನರ್ ಕೆಲಸ ಮಾಡ್ತಾ ಇದೀನಿ...

ನನ್ ಲೈಪ್ ನಲ್ಲಿ ಕೆಲವು ಟರ್ನಿಂಗ್ ಪಾಯಿಂಟ್ ಗಳು ಸಿಕ್ಕವು ಅದುಕ್ಕೆ ನಿಜವಾಗ್ಲೂ ಕೆಲವರು ನಂಗೆ ಸಖತ್ ಸಹಾಯ ಮಾಡಿದ್ರು ನಮ್ ಮನೆ ಅವ್ರು ಮತ್ತೆ ನನ್ ಪ್ರೆಂಡ್ಸ್ ಮತ್ತು ಇನ್ ಕೆಲವ್ರು ಆದ್ರು...

ಶಶಿಧರ್, ಮಧು ಅಣ್ಣ, ಡಿಲ್ಲಿಸರ್, ವಿಳ್ಯಾ, ವಿನೋಧ್ ಮತ್ತೆ ನನ್ನ ಬೆಂಗಳೂರು ಪ್ರೆಂಡ್ಸ್........ ..........................
ನಿಜವಾಗ್ಲೂ ಇವರೆಲ್ಲಾ ನನ್ ಲೈಪ್ ಗೆ ಟರ್ನಿಂಗ್ ಕೊಟ್ಟ ಮಹಾನ್ ವ್ಯಕ್ತಿಗಳು........

Saturday, 16 July 2011

ಚಂದ್ರಶೇಖರ ಇದು ನನ್ನ ಕಥೆ


ಕನ್ನಡ ಕುಲ ಕೋಟಿಗೆ ನನ್ನ ನಮಸ್ಕಾರಗಳು
 
ನಾನು ಚಂದ್ರು .... ಮಲ್ಟಿಮೀಡಿಯ ಚಂದ್ರು, ನಾನು April 14 1982 ತಾರೀಕಿನಂದು ಬೆಂಗಳೂರು ನಗರ, ಆನೇಕಲ್ ತಾಲ್ಲೂಕು, ಸಿಂಗಸಂದ್ರ ಗ್ರಾಮದಲ್ಲಿ ಜನನ. ತಾಯಿ ಕಮಲಮ್ಮ ಮತ್ತು ತಂದೆ ಕೃಷ್ಣಪ್ಪ, ಒಬ್ಬ ಅಣ್ಣ, ಒಬ್ಬಳೇ ಅಕ್ಕ ನಾನು ಮೂರನೇಯವರು.

ವಿದ್ಯಾಬ್ಯಾಸ

ಪ್ರೈಮರಿ ಸ್ಕೂಲ್, ಸಿಂಗಸಂದ್ರ ಗ್ರಾಮದ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಬ್ಯಾಸ ಭಾರತಿ ಪ್ರೌಡಶಾಲೆ ಆನೇಕಲ್ಲಿನಲ್ಲಿ. ಪತ್ರಿಕೊದ್ಯಮದಲ್ಲಿ ಅನುಭವ. ಓದಿದ್ದು ಅಲ್ಪ.......

ಪ್ರಾಣ ಸ್ನೇಹಿತ್ರು....
ನನ್ನ ಪ್ರಾಣ ಸ್ನೇಹಿತರು ಅಂದ್ರೆ ವಿಶ್ವ, ಚೇತನ್, ಬಾಸ್ಕರ, ಸುನೀಲ ಇಷ್ಟು ಜನ. ಯಾಕೆಂದ್ರೆ ಯಾವಗ್ಲೂ ಅವತ್ತಿಂದ ಇವತ್ತಿನವರೆವಿಗೂ ನನ್ನೇಲ್ಲಾ ಕಷ್ಟ ಸುಖಗಳನ್ನ ನೋವು ನಲಿವುಗಳನ್ನು ಹಂಚಿಕೊಳ್ಲಬೇಕೆಂದ್ರೆ ತಕ್ಷಣ ಸಿಕ್ಬಿಡ್ತಾರೆ.

ಕೆಲಸ
ಮಾಡಿದ್ದು 36 ಕೆಲಸ, ಅನುಭವ 19 ವರ್ಷದ ದುಡಿಮೆ,  ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಟ್ಟ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................

ನನಗೆ ಇಷ್ಟವಾದವುಗಳು

ನನ್ನ ತಂದೆ ತಾಯಿ, ನನ್ನಕ್ಕ ಶಕುಂತಲ, ನನ್ನ ಅಕ್ಕನ ಮಕ್ಕಳು ಸಂಧ್ಯಾ ಮತ್ತು ನವೀನ ಹಾಗೇ ನನ್ನಣ್ಣನ ಮಗ ಅಕ್ಷಯ, ಕನ್ನಡ ಭಾಷೆ, ಪುಸ್ತಕಗಳು, ಪಂಚಪ್ರಾಣವಾದ ಕೋಸಂಬರಿ, ನನ್ನೆಲ್ಲಾ ತಪ್ಪು ಸರಿಗಳನ್ನು ತಿದ್ದಿ ತೀಡಿ ಮುನ್ನೆಡೆಸುವ ನನ್ನ ಆತ್ಮೀಯರಾದ ತೋಪಯ್ಯ, ಮಂಜಣ್ಣ, ಬಿ.ಟಿ.ರವಿ, ಸೀನಣ್ಣ, ರಾಜಣ್ಣ, ಲೋಕನಾಥ, ವಕೀಲರಾದ ವಿಶ್ವನಾಥ, ವಿಜಯ ಕರ್ನಾಟಕ ಪತ್ರಕರ್ತರಾದ ಕೆ.ವಿ. ಲಕ್ಷ್ಮೀನಾರಾಯಣ, ಮೂರ್ತಿ ಅಣ್ಣ, ನಮ್ ಗುರುಗಳಾದ ಸುವರ್ಣ ಸ್ಟುಡಿಯೋ ಸೀನಪ್ಪ, ಶ್ರೀರಾಮಣ್ಣ, ನನಗೆ ಬಧುಕಲು ನೆಲೆ ನೀಡಿರುವ ಸದಾ ನನಗೆ ಓಳ್ಳಯದನ್ನೇ ಬಯಸುವ ಪ್ರಸಾಧಣ್ಣ ಇಸ್ಟೆ ಅಲ್ಲಾ ನನ್ಬಗ್ಗೆ ಕಾಳಜಿಯಿರುವ ನನ್ನೆಲ್ಲಾ ಸ್ನೇಹಿತರು ಹೇಳುತ್ತಿದ್ದರೆ ಬರೆಯಲು ಜಾಗವೇ ಸಾಕಾಗುವುದಿಲ್ಲ. ಆದುದರಿಂದ ನನಗೆ ಜಗತ್ತೆ ಇಷ್ಟ...


ಜೀವನ 

ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ,  ಆರ್ಟ್ ಎಗ್ಸಿಬಿಶನ್, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ  ಅಂದ್ರೆ ಪ್ರಾಣ, ಅಂತರಜಾಲದಲ್ಲಿ ಜಾಲಾಡೋದು, ನವೀನ ರೀತಿಯ ತಂತ್ರಾಂಶಗಳ ಬಗ್ಗೆ ರಿಸರ್ಚು, ವೆಬ್ ಡಿಸೈನು, ಬ್ಲಾಂಗಿಂಗು, ಚಾಂಟಿಂಗು, ಅಪರೂಪಕ್ಕೆ ಹರಟೆ ಹೊಡೆಯಲು ಸಾಕಷ್ಟು ಚೆಡ್ಡಿ ದೊಸ್ತ್......... 

ಈ ಬ್ಲಾಗ್ಸ್ ಕೂಡ ನಂದೇ ನೋಡ್ತಿರಲ್ವ?


ಜವಬ್ದಾರಿ, ಆಸಕ್ತಿ: 

ಸಂಚಯನೆಲೆ ಸಂಸ್ಥೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) 
ಸುಮಾರು ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಂಪತಿಗಳಾದ ವಿಜಿಯಣ್ಣ ಹಾಗೂ ಯಶೋಧ ಮೇಡಂ ರವರ ಸಂಸ್ಥೆಯಲ್ಲಿ ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ. 
ಆನೇಕಲ್ ನಾಗರೀಕ ವೇದಿಕೆ
ಸುಮಾರು 30 ವರ್ಷಗಳಿಂದ ನಾಗರೀಕರ ಕುಂದುಕೊರತೆಗಳ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಕೆಲಸ ನಿರ್ವಹಣೆ.
ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ  
ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸುಮಾರು ಹತ್ತಾರು ವರ್ಷಗಳಿಂದ ಏಕಲವ್ಯನಂತೆ ತಾವೋಬ್ಬರೇ ಆದರೂ ಪ್ರಾಣಿ ಪಕ್ಷಿಗಳನ್ನು ಪರಿಸರವನ್ನು ಉಳಿಸಬೇಕೆಂಬ ಚಲದಿಂದ ಯಾವುದೇ ಸ್ವಾರ್ಥವಿಲ್ಲದೆ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಒಂದು ರಾಜ್ಯ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿರುವ ಬನ್ನೇರುಘಟ್ಟ ಮಂಜಣ್ಣನವರ ಸಂಸ್ಥೆಯಲ್ಲಿ  ನಾಗರೀಕರಲ್ಲಿ ಹಾಗೂ ಮಕ್ಕಳಲ್ಲಿ ಪರಿರಸ ನಮಗೆಷ್ಟು ಮುಖ್ಯ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸುವಿಕೆ.
ನಿರಂತರ ಪೌಂಡೇಶನ್ 
ವಿಧ್ಯಾಭ್ಯಾಸದಿಂದ ವಂಚಿತರಾದ ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಾಲ ಕಾರ್ಮಿಕ ಬಡ ಮಕ್ಕಳನ್ನು ಸುಕ್ಷಿತರನ್ನಾಗಿ ಮಾಡಲು ಉಚಿತ ಜ್ಞಾನಾರ್ಜನೆ ನೀಡುತ್ತಿರುವ ಧಾನಗಳಲ್ಲಿ ಶ್ರೇಷ್ಠ ಧಾನ ವಿಧ್ಯಾ ಧಾನ ವೆಂದು ನಂಬಿ ತಮ್ಮೆಲ್ಲ ತನು, ಮನ, ಧನ ವನ್ನು ಧಾರೆಯೆರದು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಸೇವೆ. 
ಆನೇಕಲ್ ತಾಲ್ಲೂಕು ಪೋಟೋಸ್ಟುಡಿಯೋ ಮಾಲೀಕರ ಸಂಘ
ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ.

 ಇನ್ನೂ ಹಲವಾರು ಸರ್ಕಾರಿ ಹಾಗೂ ಖಾಸಗಿ ಸಂಘ, ಸಂಸ್ಥೆಗಳಲ್ಲಿ ಸದಸ್ಯತ್ವ.