Friday 26 August 2011

ಚೆಡ್ಡಿ ದೊಸ್ತ್ ಟೀಮು

 
ಚೆಡ್ಡಿ ದೊಸ್ತ್ ಟೀಮು

ಬಾಸ್ಕರ->ಸುನೀಲ->ವಿಶ್ವನಾಥ->ಚಂದ್ರಶೇಖರ->ಚೇತನ 
ಇನ್ನೂ ಇದೀವಿ

ಸಿನ್ಸ್ 1994 to 2........ 

ಹಾಗೆ ಹೇಳಿಕೊಳ್ಳೋದಕ್ಕೆ ನಮಗೆ ಬೇಜಾರಿಲ್ಲ. ಕೀಳರಿಮೆಯಂತೂ ಇಲ್ವೇ ಇಲ್ಲ. ಹಾಗಂತಾ ಬಾಲ್ಯದ ಜೀವನಾ ಕಷ್ಟನೇ ಆಗಿಲ್ವಾ ಅಂತಾ ಕೇಳಿದ್ರೆ..., ಖಂಡಿತಾ ಆಗಿದೆ.... ಅಷ್ಟಕ್ಕೂ ಅದನ್ನಾ ದಾಟಿ ಬಂದಿದೀವಿ... ಇನ್ನೂ ಮುಂದೆ ಮುಂದೆ ದಾಪುಗಾಲಿಡುತ್ತಾ ಇದೀವಿ. ಆದ್ರೆ ಮುಂದೆ ಹೋದ ತಕ್ಷಣ ಹಿಂದಿನ ದಿನಗಳನ್ನೆಲ್ಲಾ ಮರೆಯೋಕೆ ಆಗುತ್ತಾ..? ಆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳೋದಕ್ಕೆ, ನಮ್ಮಂತಾ ಅದೆಷ್ಟೋ ಜನರಿಗೆ ನೆನಪು ಮಾಡಿಸೋದಕ್ಕೆ ಈ ಬ್ಲಾಗ್ ಒಂದು ಪುಟ್ಟ ಅಂಗಳ ಅಷ್ಚೇ. ನಾವೆಲ್ಲಾ ಒಟ್ಟಾಗಿ ಇಲ್ಲಿ ನಮ್ ಬಗ್ಗೆ, ಆಡಿದ್ದು, ಕುಣಿದಿದ್ದು, ಆಟ, ಪಾಠ, ಊಟ, ಜಗಳ, ತೀಟೆ, ಮುನಿಸು, ಕೋಪ ಹಾಗೂ ಈಗಿನ ವೃತ್ತಿ ಜೀವನದ ಸಂತಿಗಳ ಬಗ್ಗೆ ಇನ್ನೂ ಏನೆಲ್ಲಾ.........

ನಮ್ಮ ಆ ದಿನಗಳನ್ನಾ ನೆನಪಿಸಿಕೊಳ್ಳೋಣ. ಈ ದಿನ ಹೇಗಿದೆ ಅನ್ನೋದನ್ನಾ ಕಣ್ಬಿಟ್ಟು ನೋಡೋಣ.
ಸಲಹೆಗಳಿಗೆ ಸದಾ ಸ್ವಾಗತ.......

ಜೀವನವೆಂದರೆ ನಾವು ಹುಟ್ಟಿನಿಂದ - ಸಾವಿನವರೆಗೂ ಬದುಕಲು ಕಲಿಸುವ ಒಂದು ಪುಸ್ತಕ. ಅದರ ಕೊನೆಯ ಪುಟಗಳು ಹರಿದು ಹೋಗಿರುತ್ತವೆ. ಪುಸ್ತಕದ ಪ್ರತಿಯೊಂದು ಅಧ್ಯಾಯದಲ್ಲಿ ನಾವು ಏನಾದರೊಂದನ್ನು ಕಲಿಯುತ್ತಾ ಹೋಗುತ್ತೇವೆ, ಅನುಭವಿಸುತ್ತೇವೆ, ಸ್ವೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದ ಪುಸ್ತಕವು ಬೇರೆ-ಬೇರೆಯದಾಗಿರುತ್ತದೆ. ಜೀವನವೆಂಬ ಪುಸ್ತಕದಲ್ಲಿ ನಮಗೆ ಅರಿಯಲಾರದ ಹೇಳಲಾರದ ರಹಸ್ಯಗಳು, ಬದಲಿಸಲಾಗದ ಸುಖ, ದುಃಖ-ಪಶ್ಚಾತಾಪಗಳು, ನನಸಾಗದ ಕನಸುಗಳು ಮತ್ತು ಮರೆಯಲಾಗದ ಪ್ರೀತಿ,ನೆನಪುಗಳು, ಅನುಭವಗಳು ತುಂಬಿರುತ್ತದೆ. ನಾವು ಕೊನೆಯುಸಿರೆಳೆಯುವ ಕೊನೆ ಘಳಿಗೆಯಲ್ಲಿ, ಜೀವನವೆಂಬ ಪುಸ್ತಕದ ಕೊನೆಯ ಪುಟಗಳು ಇರಲಾರದ ಕಾರಣ ನಮ್ಮ ಜೀವನದ ಪಾಠಕ್ಕೆ ನಮ್ಮದೇ ಆದ ಕೊನೆಯನ್ನು ಹೇಳಿ ಹೊರಡುತ್ತೇವೆ. ನಿಮ್ಮ ಜೀವನವೆಂಬ ಪುಸ್ತಕವನ್ನು ಇಷ್ಟಪಟ್ಟು, ಕುತೂಹಲದಿಂದ ಓದಿ ಕಲಿಯಿರಿ,ಬೇಸರವಾಯಿತೆಂದು ಸುಟ್ಟು ಹಾಕಬೇಡಿ. ಜೀವನವೆಂಬ ಪುಸ್ತಕದ ಕೊನೆಯನ್ನು ನಾವು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು.
ಕಣ್ಣು ತೆರೆದರೆ ಜನನ, ಕಣ್ಣು ಮುಚ್ಚಿದರೆ ಮರಣ,
ಇವೆರಡರ ನಡುವೆ ರೆಪ್ಪೆಯಾಡಿಸುವುದೇ, ಜೀವನ
ಆ ಜೀವನದಲ್ಲಿ ಬಂದು ಮಿಡಿಯುವುದೇ, ನಮ್ಮೀ ಗೆಳತನ.

ಸ್ನೇಹ ಎನ್ನುವುದು ಕೃಷ್ಣ- ಕುಚೇಲರಂತಿರಬೇಕು;
ಈ ಸ್ನೇಹಕ್ಕೆ, ಬಡವ-ಶ್ರೀಮಂತ, ಮೇಲು-ಕೀಳು, ಜಾತಿ-ಬೇದ ಗಂಡು-ಹೆಣ್ಣು ಎನ್ನುವುದಿರುವುದಿಲ್ಲ. ಇದು ಯಾರಲ್ಲಿ ಇರುವುದಿಲ್ಲವೋ ಅವರು ನಿಜವಾಗಿಯೂ ಸ್ನೇಹ ಜೀವಿಗಳಾಗಿರುತ್ತಾರೆ.

ಒಂದೇ ವಯಸ್ಸಿನ ಎರಡು ಮಕ್ಕಳು;
ಅವರು ಯಾರು ಅಂತ ಅವರಿಗೇ ಗೊತ್ತಿರೋದಿಲ್ಲ. ಆದ್ರು ಆ ಮಕ್ಕಳು ಬೇಗ ಒಂದಾಬ್ಗಿಡ್ತಾರೆ. ಆ ಮುಗ್ದ ಮಾತು, ಹಾ ಹಾಃ! ಅವರ ಆಟಿಕೆಯನ್ನು ಮತ್ತೊಬ್ಬರು ಕಸಿದುಕೊಂಡರೆ, ಅದನ್ನು ಮತ್ತೆ ಹಿಂದಿರುಗಿಸುವ ತನಕ ಬಿಡೋದಿಲ್ಲ ಆ ಮಗು, ಇದು ಗೆಳೆತನ.
ಹಾಗೇ......! ಸ್ಕೂಲಿಗೆ ಹೋಗುವ ಮಕ್ಕಳು, ಕಾಯುತ್ತಾ..., ಅವರ ಜೋತೆ ಕೂತ್ಕೊಂಡು, ಕೈ ಕೈ ಹಿಡ್ಕೋಂಡು, ಒಬ್ಬರ ಬಾಕ್ಸ್ ಇನ್ನೊಬ್ಬರು ಶೆರ್ ಮಾಡ್ಕೊಂಡು ತಿಂತಾರೆ, ಹೀಗೆ ನಮ್ಮ ಸ್ಕೂಲ್ ಲೈಫ್ ನಲ್ಲಿ ನಡೆದಿದೆ. ನಿಮ್ಮ ಲೈಫ್ ನಲ್ಲೂ ಹೀಗೇನಾ.....?

1 comment: