ಕನ್ನಡ ಕುಲ ಕೋಟಿಗೆ ನನ್ನ ನಮಸ್ಕಾರಗಳು
ನಾನು ಚಂದ್ರು .... ಮಲ್ಟಿಮೀಡಿಯ ಚಂದ್ರು, ನಾನು April 14 1982 ತಾರೀಕಿನಂದು ಬೆಂಗಳೂರು ನಗರ, ಆನೇಕಲ್ ತಾಲ್ಲೂಕು, ಸಿಂಗಸಂದ್ರ ಗ್ರಾಮದಲ್ಲಿ ಜನನ. ತಾಯಿ ಕಮಲಮ್ಮ ಮತ್ತು ತಂದೆ ಕೃಷ್ಣಪ್ಪ, ಒಬ್ಬ ಅಣ್ಣ, ಒಬ್ಬಳೇ ಅಕ್ಕ ನಾನು ಮೂರನೇಯವರು.
ವಿದ್ಯಾಬ್ಯಾಸ
ಪ್ರೈಮರಿ ಸ್ಕೂಲ್, ಸಿಂಗಸಂದ್ರ ಗ್ರಾಮದ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಬ್ಯಾಸ ಭಾರತಿ ಪ್ರೌಡಶಾಲೆ ಆನೇಕಲ್ಲಿನಲ್ಲಿ. ಪತ್ರಿಕೊದ್ಯಮದಲ್ಲಿ ಅನುಭವ. ಓದಿದ್ದು ಅಲ್ಪ.......
ಪ್ರಾಣ ಸ್ನೇಹಿತ್ರು....
ನನ್ನ ಪ್ರಾಣ ಸ್ನೇಹಿತರು ಅಂದ್ರೆ ವಿಶ್ವ, ಚೇತನ್, ಬಾಸ್ಕರ, ಸುನೀಲ ಇಷ್ಟು ಜನ. ಯಾಕೆಂದ್ರೆ ಯಾವಗ್ಲೂ ಅವತ್ತಿಂದ ಇವತ್ತಿನವರೆವಿಗೂ ನನ್ನೇಲ್ಲಾ ಕಷ್ಟ ಸುಖಗಳನ್ನ ನೋವು ನಲಿವುಗಳನ್ನು ಹಂಚಿಕೊಳ್ಲಬೇಕೆಂದ್ರೆ ತಕ್ಷಣ ಸಿಕ್ಬಿಡ್ತಾರೆ.

ಕೆಲಸ
ಮಾಡಿದ್ದು 36 ಕೆಲಸ, ಅನುಭವ 19 ವರ್ಷದ ದುಡಿಮೆ, ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಟ್ಟ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................
ನನಗೆ ಇಷ್ಟವಾದವುಗಳು
ನನ್ನ ತಂದೆ ತಾಯಿ, ನನ್ನಕ್ಕ ಶಕುಂತಲ, ನನ್ನ ಅಕ್ಕನ ಮಕ್ಕಳು ಸಂಧ್ಯಾ ಮತ್ತು ನವೀನ ಹಾಗೇ ನನ್ನಣ್ಣನ ಮಗ ಅಕ್ಷಯ, ಕನ್ನಡ ಭಾಷೆ, ಪುಸ್ತಕಗಳು, ಪಂಚಪ್ರಾಣವಾದ ಕೋಸಂಬರಿ, ನನ್ನೆಲ್ಲಾ ತಪ್ಪು ಸರಿಗಳನ್ನು ತಿದ್ದಿ ತೀಡಿ ಮುನ್ನೆಡೆಸುವ ನನ್ನ ಆತ್ಮೀಯರಾದ ತೋಪಯ್ಯ, ಮಂಜಣ್ಣ, ಬಿ.ಟಿ.ರವಿ, ಸೀನಣ್ಣ, ರಾಜಣ್ಣ, ಲೋಕನಾಥ, ವಕೀಲರಾದ ವಿಶ್ವನಾಥ, ವಿಜಯ ಕರ್ನಾಟಕ ಪತ್ರಕರ್ತರಾದ ಕೆ.ವಿ. ಲಕ್ಷ್ಮೀನಾರಾಯಣ, ಮೂರ್ತಿ ಅಣ್ಣ, ನಮ್ ಗುರುಗಳಾದ ಸುವರ್ಣ ಸ್ಟುಡಿಯೋ ಸೀನಪ್ಪ, ಶ್ರೀರಾಮಣ್ಣ, ನನಗೆ ಬಧುಕಲು ನೆಲೆ ನೀಡಿರುವ ಸದಾ ನನಗೆ ಓಳ್ಳಯದನ್ನೇ ಬಯಸುವ ಪ್ರಸಾಧಣ್ಣ ಇಸ್ಟೆ ಅಲ್ಲಾ ನನ್ಬಗ್ಗೆ ಕಾಳಜಿಯಿರುವ ನನ್ನೆಲ್ಲಾ ಸ್ನೇಹಿತರು ಹೇಳುತ್ತಿದ್ದರೆ ಬರೆಯಲು ಜಾಗವೇ ಸಾಕಾಗುವುದಿಲ್ಲ. ಆದುದರಿಂದ ನನಗೆ ಜಗತ್ತೆ ಇಷ್ಟ...
ಜೀವನ
ಜೀವನ
ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ, ಆರ್ಟ್ ಎಗ್ಸಿಬಿಶನ್, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ ಅಂದ್ರೆ ಪ್ರಾಣ, ಅಂತರಜಾಲದಲ್ಲಿ ಜಾಲಾಡೋದು, ನವೀನ ರೀತಿಯ ತಂತ್ರಾಂಶಗಳ ಬಗ್ಗೆ ರಿಸರ್ಚು, ವೆಬ್ ಡಿಸೈನು, ಬ್ಲಾಂಗಿಂಗು, ಚಾಂಟಿಂಗು, ಅಪರೂಪಕ್ಕೆ ಹರಟೆ ಹೊಡೆಯಲು ಸಾಕಷ್ಟು ಚೆಡ್ಡಿ ದೊಸ್ತ್.........
ಜವಬ್ದಾರಿ, ಆಸಕ್ತಿ:
ಸಂಚಯನೆಲೆ ಸಂಸ್ಥೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)
ಸುಮಾರು ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಂಪತಿಗಳಾದ ವಿಜಿಯಣ್ಣ ಹಾಗೂ ಯಶೋಧ ಮೇಡಂ ರವರ ಸಂಸ್ಥೆಯಲ್ಲಿ ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.
ಆನೇಕಲ್ ನಾಗರೀಕ ವೇದಿಕೆ
ಸುಮಾರು 30 ವರ್ಷಗಳಿಂದ ನಾಗರೀಕರ ಕುಂದುಕೊರತೆಗಳ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಕೆಲಸ ನಿರ್ವಹಣೆ.
ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ
ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸುಮಾರು ಹತ್ತಾರು ವರ್ಷಗಳಿಂದ ಏಕಲವ್ಯನಂತೆ ತಾವೋಬ್ಬರೇ ಆದರೂ ಪ್ರಾಣಿ ಪಕ್ಷಿಗಳನ್ನು ಪರಿಸರವನ್ನು ಉಳಿಸಬೇಕೆಂಬ ಚಲದಿಂದ ಯಾವುದೇ ಸ್ವಾರ್ಥವಿಲ್ಲದೆ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಒಂದು ರಾಜ್ಯ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿರುವ ಬನ್ನೇರುಘಟ್ಟ ಮಂಜಣ್ಣನವರ ಸಂಸ್ಥೆಯಲ್ಲಿ ನಾಗರೀಕರಲ್ಲಿ ಹಾಗೂ ಮಕ್ಕಳಲ್ಲಿ ಪರಿರಸ ನಮಗೆಷ್ಟು ಮುಖ್ಯ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸುವಿಕೆ.
ನಿರಂತರ ಪೌಂಡೇಶನ್
ವಿಧ್ಯಾಭ್ಯಾಸದಿಂದ ವಂಚಿತರಾದ ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಾಲ ಕಾರ್ಮಿಕ ಬಡ ಮಕ್ಕಳನ್ನು ಸುಕ್ಷಿತರನ್ನಾಗಿ ಮಾಡಲು ಉಚಿತ ಜ್ಞಾನಾರ್ಜನೆ ನೀಡುತ್ತಿರುವ ಧಾನಗಳಲ್ಲಿ ಶ್ರೇಷ್ಠ ಧಾನ ವಿಧ್ಯಾ ಧಾನ ವೆಂದು ನಂಬಿ ತಮ್ಮೆಲ್ಲ ತನು, ಮನ, ಧನ ವನ್ನು ಧಾರೆಯೆರದು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಸೇವೆ.
ಆನೇಕಲ್ ತಾಲ್ಲೂಕು ಪೋಟೋಸ್ಟುಡಿಯೋ ಮಾಲೀಕರ ಸಂಘ
ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ.
ಈ ಬ್ಲಾಗ್ಸ್ ಕೂಡ ನಂದೇ ನೋಡ್ತಿರಲ್ವ?
- ಚಂದ್ರು ಮಲ್ಟಿಮೀಡಿಯಾ
- ಅಪರೂಪ
- ಆನೇಕಲ್ ನಾಗರೀಕ ವೇದಿಕೆ
- ಉಡುಗೊರೆ
- ಕನಸಿನ ಇಂಚರ
- ಕರ್ನಾಟಕ ಪರಂಪರೆ
- ಚೆಡ್ಡಿ ದೊಸ್ತ್
- ನೀ Swarga
- ಸ್ವಯಂವೈದ್ಯ
- ಪ್ರವಾಸಿತಾಣ
- ಬಾಲವನ
- ಲವಲವಿಕೆ
ಜವಬ್ದಾರಿ, ಆಸಕ್ತಿ:
ಸಂಚಯನೆಲೆ ಸಂಸ್ಥೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)
ಸುಮಾರು ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಂಪತಿಗಳಾದ ವಿಜಿಯಣ್ಣ ಹಾಗೂ ಯಶೋಧ ಮೇಡಂ ರವರ ಸಂಸ್ಥೆಯಲ್ಲಿ ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.
ಆನೇಕಲ್ ನಾಗರೀಕ ವೇದಿಕೆ
ಸುಮಾರು 30 ವರ್ಷಗಳಿಂದ ನಾಗರೀಕರ ಕುಂದುಕೊರತೆಗಳ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಕೆಲಸ ನಿರ್ವಹಣೆ.
ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ
ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸುಮಾರು ಹತ್ತಾರು ವರ್ಷಗಳಿಂದ ಏಕಲವ್ಯನಂತೆ ತಾವೋಬ್ಬರೇ ಆದರೂ ಪ್ರಾಣಿ ಪಕ್ಷಿಗಳನ್ನು ಪರಿಸರವನ್ನು ಉಳಿಸಬೇಕೆಂಬ ಚಲದಿಂದ ಯಾವುದೇ ಸ್ವಾರ್ಥವಿಲ್ಲದೆ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಒಂದು ರಾಜ್ಯ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿರುವ ಬನ್ನೇರುಘಟ್ಟ ಮಂಜಣ್ಣನವರ ಸಂಸ್ಥೆಯಲ್ಲಿ ನಾಗರೀಕರಲ್ಲಿ ಹಾಗೂ ಮಕ್ಕಳಲ್ಲಿ ಪರಿರಸ ನಮಗೆಷ್ಟು ಮುಖ್ಯ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸುವಿಕೆ.
ನಿರಂತರ ಪೌಂಡೇಶನ್
ವಿಧ್ಯಾಭ್ಯಾಸದಿಂದ ವಂಚಿತರಾದ ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಾಲ ಕಾರ್ಮಿಕ ಬಡ ಮಕ್ಕಳನ್ನು ಸುಕ್ಷಿತರನ್ನಾಗಿ ಮಾಡಲು ಉಚಿತ ಜ್ಞಾನಾರ್ಜನೆ ನೀಡುತ್ತಿರುವ ಧಾನಗಳಲ್ಲಿ ಶ್ರೇಷ್ಠ ಧಾನ ವಿಧ್ಯಾ ಧಾನ ವೆಂದು ನಂಬಿ ತಮ್ಮೆಲ್ಲ ತನು, ಮನ, ಧನ ವನ್ನು ಧಾರೆಯೆರದು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ಸ್ವಯಂ ಸೇವಕನಾಗಿ ಸೇವೆ.
ಆನೇಕಲ್ ತಾಲ್ಲೂಕು ಪೋಟೋಸ್ಟುಡಿಯೋ ಮಾಲೀಕರ ಸಂಘ
ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ.
ಇನ್ನೂ ಹಲವಾರು ಸರ್ಕಾರಿ ಹಾಗೂ ಖಾಸಗಿ ಸಂಘ, ಸಂಸ್ಥೆಗಳಲ್ಲಿ ಸದಸ್ಯತ್ವ.
abba chandru enu nimma vishwaroopa darshana
ReplyDeletepapernalli nim bagge odi thakshana naanu netnalli nimma bagge nodide nijvaglu thumba chennagide ee karyakrama na munduvarsi
sogasgide nimma ella blogina designs